ಪ್ರಚಲಿತ ವಿದ್ಯಮಾನಗಳು 19-09-2023 Current affairs in Kannada 19-09-2023 September 19, 2023 by admin 5/5 - (30 votes) Current Affairs in Kannada ಪ್ರಚಲಿತ ವಿದ್ಯಮಾನಗಳು 19-09-2023 Current affairs in Kannada 19-09-2023 0% Current affairs in Kannada 19-09-2023 1 / 5 1) ಇತ್ತೀಚಿಗೆ ನಿಧನರಾದ ಗೀತಾ ಮೆಹ್ತಾ ಅವರು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ A) ಲೇಖಕರು B) ಚಿತ್ರ ನಿರ್ದೇಶಕರು C) ಪತ್ರಕರ್ತರು D) ಮೇಲಿನ ಎಲ್ಲವೂ Geeta Mehtaಖ್ಯಾತ ಲೇಖಕಿ, ಚಿತ್ರ ನಿರ್ದೇಶಕಿ ಹಾಗೂ ಪತ್ರಕರ್ತೆ ಗೀತಾ ಮೆಹ್ತಾ ಅವರು ಶನಿವಾರ ಹೊಸದಿಲ್ಲಿಯಲ್ಲಿ ನಿಧನರಾಗಿ ದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಎನ್ ಬಿಸಿಗಾಗಿ ಬಾಂಗ್ಲಾದೇಶದ 1971ರ ವಿಮೋಚನಾ ಯುದ್ಧವನ್ನು ವರದಿ ಮಾಡಿರುವುದಕ್ಕೆ ಹಾಗೂ ‘ಡೇಟ್ ಲೈನ್ ಬಾಂಗ್ಲಾದೇಶ’ ಎಂಬ ಜನಪ್ರಿಯ ಸಾಕ್ಷ್ಯಚಿತ್ರ ನಿರ್ದೇಶಿಸಿರುವುದಕ್ಕಾಗಿ ಅವರು ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. 2 / 5 2) ಇತ್ತೀಚೆಗೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಭಾರತದ 41 ನೇ ತಾಣವಾದ ಶಾಂತಿನಿಕೇತನ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ A) ಕರ್ನಾಟಕ B) ಪಶ್ಚಿಮ ಬಂಗಾಳ C) ಗುಜರಾತ್ D) ಉತ್ತರ್ ಪ್ರದೇಶ್ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನವು ಭಾರತದ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿದೆ. ರಾಷ್ಟ್ರಗೀತೆ ‘ಜನಗಣಮನ’ದ ರಚನೆಕಾರ ರವೀಂದ್ರನಾಥ ಠಾಗೋರ್ ಅವರ ಶಾಂತಿನಿಕೇತನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ. ಇದರಿಂದಾಗಿ ದೇಶದಲ್ಲಿರುವ ಒಟ್ಟು ವಿಶ್ವ ಪಾರಂಪರಿಕ ತಾಣಗಳ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ. ಶಾಂತಿನಿಕೇತನ ವನ್ನು ರವೀಂದ್ರನಾಥ ಟಾಗೋರ್ನವರ ತಂದೆ ಮಹರ್ಷಿ ದೇವೇಂದ್ರನಾಥ್ರವರು 1863ರಲ್ಲಿ ಪಶ್ಚಿಮ ಬಂಗಾಳದ ಬೀರ್ಭೂಂನಲ್ಲಿ ಸ್ಥಾಪಿಸಿದ್ದರು. ನಂತರ ರವೀಂದ್ರನಾಥ್ ಟಾಗೋರರು ಮುನ್ನಡೆ ಸಿಕೊಂಡು ಅದನ್ನು ವಿಶ್ವಭಾರತಿ ಎಂಬ ವಿಶ್ವ ವಿದ್ಯಾಲಯ ವನ್ನಾಗಿಸಿದರು. 3 / 5 3) ಇತ್ತೀಚೆಗೆ ಮೂರು ವರ್ಷದ ಒಳಗಿನ ಮಕ್ಕಳನ್ನು ನೋಡಿಕೊಳ್ಳಲು ಕರ್ನಾಟಕ ಸರ್ಕಾರ ಕೈಗೊಂಡ ಯೋಜನೆಯ ಹೆಸರೇನು A) ಇಂದಿರಾ ಗಾಂಧಿ ಶಿಶು ಪಾಲನೆ B) ಅಮ್ಮನ ಮನೆ ಯೋಜನೆ C) ಅಜ್ಜಿ ಮನೆ ಯೋಜನೆ D) ಕೂಸಿನ ಮನೆ ಯೋಜನೆ ಪ್ರಸಕ್ತ 2023-24ರ ಬಜೆಟ್ ಘೋಷಣೆಯಂತೆ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ‘ಕೂಸಿನ ಮನೆ’ ಶಿಶುವಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 4 / 5 4) ವಿಶ್ವ ಓಜೋನ್ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ A) ಸೆಪ್ಟೆಂಬರ್ 15 B) ಸಪ್ಟೆಂಬರ್ 16 C) ಸಪ್ಟೆಂಬರ್ 18 D) ಸೆಪ್ಟೆಂಬರ್ 19 ಓಝೋನ್ ಎಂದರೇನುಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿರುತ್ತದೆಓಝೋನ್ ಮೂರು ಆಮ್ಲಜನಕ ಪರಮಾಣುಗಳಿಂದ (O3) ಮಾಡಲ್ಪಟ್ಟ ಅಣುವಾಗಿದೆ. ಓಜೋನ್ ಉಪಯೋಗಗಳು1 . ವಾಯುಮಂಡಲದ ಓಝೋನ್: ಸೂರ್ಯನಿಂದ ಹಾನಿಕಾರಕ UV ವಿಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ.2. ವೈದ್ಯಕೀಯ ಮತ್ತು ನೀರಿನ ಚಿಕಿತ್ಸೆ: ಓಝೋನ್ ಅನ್ನು ವೈದ್ಯಕೀಯ ಚಿಕಿತ್ಸೆ ಮತ್ತು ನೀರಿನ ಶುದ್ಧೀಕರಣ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ. 5 / 5 5) ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಾರಂಭಿಸುವ ಹಕ್ಕನ್ನು ಈ ಕೆಳಗಿನವರಲ್ಲಿ ಯಾರು ಕಾಯ್ದಿರಿಸಿದ್ದಾರೆ A) ಭಾರತದ ಸಂಸತ್ತು B) ಭಾರತದ ಸರ್ವೋಚ್ಚ ನ್ಯಾಯಾಲಯ C) ಭಾರತದ ಅಧ್ಯಕ್ಷರು D) ಯೂನಿಯನ್ ಕೌನ್ಸಿಲ್ ಆಫ್ ಮಿನಿಸ್ಟರ್ Your score is Restart Online Exam Important LinksQuestion PapersOnline ExamsCurrent Affairs in KannadaEssaysSyllabusBest Book list Ask a Question / Join our Group Instagram Facebook Twitter WhatsApp Telegram Click here