
ನನ್ನ ಜೀವನವೇ ಒಂದು ಸಂದೇಶವಾಗಿದೆ.
ನನ್ನ ಅನುಮತಿಯಿಲ್ಲದೆ ಯಾರು ನನ್ನನ್ನು ನೋಯಿಸಲಾರರು.
ನಿಮಗೆ ಯಾರು ಮುಖ್ಯ ಎಂಬುದನ್ನು ನೀವು ಅವರನ್ನು ಕಳೆದುಕೊಳ್ಳುವ ತನಕ ತಿಳಿದುಕೊಳ್ಳಲಾರಿರಿ.
ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.
ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು.
ಪ್ರಾಣಿಗಳ ಬಗ್ಗೆಯಿರುವ ಕಾಳಜಿ ನೋಡಿ ನಾವು ಆ ದೇಶದ ಮಹಾನತೆ ಹಾಗೂ ಮೌಲಿಕ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಬಹುದು.

ಸ್ವಾಭಿಮಾನದ ನಷ್ಟಕ್ಕಿಂತ ದೊಡ್ಡ ನಷ್ಟ ಬೇರೊಂದಿಲ್ಲ.
ಸತ್ಯಕ್ಕಿಂತ ದೊಡ್ಡದಾದ ದೇವರಿಲ್ಲ.
ಮನುಷ್ಯ ಅವನ ಯೋಚನೆಗಳ ಉತ್ಪನ್ನವಾಗಿದ್ದಾನೆ. ಅವನ ಯೋಚನೆಯಂತೆ ಅವನಾಗುತ್ತಾನೆ.
ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
ನೀವು ಏನು ಯೋಚಿಸುತ್ತಿರಿ, ಏನು ಮಾತಾಡುತ್ತಿರಿ ಮತ್ತು ಏನು ಮಾಡುತ್ತಿರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿರ್ಧಾರಿತವಾಗುತ್ತದೆ.
ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು.
ಸತ್ಯವಾಗಿರಿ, ಸೌಮ್ಯವಾಗಿರಿ, ನಿರ್ಭಯವಾಗಿರಿ.
ನಿಮ್ಮನ್ನು ನೀವು ಬದಲಾಯಿಸಿ – ಎಲ್ಲವೂ ನಿಮ್ಮ ಕೈಯಲ್ಲಿದೆ.
ದುರ್ಬಲರಿಗೆ ಬೇರೆಯವರನ್ನು ಕ್ಷಮಿಸುವ ಸಾಮರ್ಥ್ಯವಿರಲ್ಲ. ಕ್ಷಮೆ ಎಂಬುದು ಪ್ರಬಲರ ಲಕ್ಷಣವಾಗಿದೆ.
ನಾಳೆಯೇ ನೀವು ಸಾಯುತ್ತೀರಿ ಎಂದೇ ಇಂದು ಬದುಕಿ. ಎಂದೆಂದಿಗೂ ಬದುಕಿಯೇ ಇರುತ್ತೀರಿ ಎಂದು ಭಾವಿಸಿಕೊಂಡು ಹೊಸದನ್ನು ಕಲಿಯಿರಿ.

ಬಲಿಷ್ಠತೆ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು.
ಪ್ರೀತಿ ಜಗತ್ತಿನ ಪ್ರಬಲ ಶಕ್ತಿಯಾಗಿದೆ.
ಬಡತನ ಹಿಂಸೆಯ ಅತ್ಯಂತ ಕೆಟ್ಟ ರೂಪವಾಗಿದೆ.
ಜಗತ್ತಿನಲ್ಲಿರುವ ಎಲ್ಲಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ.
ನಿಮ್ಮನ್ನು ನೀವು ಕಂಡುಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಬೇರೆಯವರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಂಡು ಬಿಡುವುದು
ಅನಕ್ಷರತೆ ಭಾರತಕ್ಕೆ ಕಳಂಕವಾಗಿದೆ. ಅದು ತೊಲಗಬೇಕು.
ನೀವು ಏನು ಯೋಚಿಸುತ್ತಿರಿ, ಏನು ಮಾತಾಡುತ್ತಿರಿ ಮತ್ತು ಏನು ಮಾಡುತ್ತಿರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿರ್ಧಾರಿತವಾಗುತ್ತದೆ.
ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ.
ಅಸಹಿಷ್ಣುತೆಯು ಹಿಂಸೆಯ ಒಂದು ರೂಪ ಮತ್ತು ನಿಜವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅದು ಅಡ್ಡಿಯಾಗಿರುತ್ತದೆ.
ಅಹಿಂಸೆ ಶಕ್ತಿಶಾಲಿಗಳ ಅಸ್ತ್ರವಾಗಿದೆ.
ನೀವು ಸೌಮ್ಯ ರೀತಿಯಲ್ಲಿ ಈಡೀ ಜಗತ್ತನ್ನು ಅಲುಗಾಡಿಸಬಹುದು.
ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರ ಎನ್ನುವವರು ನಿಶ್ಚಿತವಾಗಿಯೂ ಬೌದ್ಧಿಕ ದಾರಿದ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಅದು ವಿಷವರ್ತುಲದ ಆರಂಭವಷ್ಟೆ.
ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.
ಮೊದಲು ಬೇರೆಯವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಆನಂತರ ನಿಮ್ಮೊಂದಿಗೆ ಹೋರಾಡುತ್ತಾರೆ. ನಂತರ ನೀವು ಗೆಲ್ಲುತ್ತೀರಿ.
ದುರ್ಬಲರಿಗೆ ಬೇರೆಯವರನ್ನು ಕ್ಷಮಿಸುವ ಸಾಮರ್ಥ್ಯವಿರಲ್ಲ. ಕ್ಷಮೆ ಎಂಬುದು ಪ್ರಬಲರ ಲಕ್ಷಣವಾಗಿದೆ.
ಅಹಿಂಸೆಗೆ ಎರಡು ನಂಬಿಕೆಗಳು ಬೇಕಾಗುತ್ತದೆ. ದೇವರು ಮೇಲೆ ನಂಬಿಕೆ ಇದ್ದಂತೆಯೇ ಮನುಷ್ಯನ ಮೇಲೆಯೂ ವಿಶ್ವಾಸ ಇರಬೇಕು.
ದೇವರಿಗೆ ಯಾವುದೇ ಧರ್ಮವಿಲ್ಲ.
ನಿಮಗೆ “ನಾನು ಅದನ್ನು ಮಾಡಬಲ್ಲೆ…” ಎಂಬ ನಂಬಿಕೆಯಿದ್ದರೆ ನಿಮಗೆ ಆರಂಭದಲ್ಲಿ ಸಾಮರ್ಥ್ಯವಿರದಿದ್ದರೂ ಕೆಲಸ ಮಾಡಲು ಪ್ರಾರಂಭಿಸಿದಾಗ ಆ ಸಾಮರ್ಥ್ಯ ಖಂಡಿತವಾಗಿಯೂ ಬರುತ್ತದೆ.
ಸಾವಿರ ಮಾತುಗಳಿಗಿಂತ ಒಂದು ಎಳ್ಳಷ್ಟು ಕೆಲಸಕ್ಕೆ ಬೆಲೆ ಜಾಸ್ತಿಯಿದೆ.
ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆ ಮೊದಲು ನೀವೇ ಆಗಬೇಕು. ನೀವೇ ಆಗಿ ಆ ಬದಲಾವಣೆ.
ಸಂತೋಷವಿಲ್ಲದೆ ಸಲ್ಲಿಸುವ ಸೇವೆ ನಿರರ್ಥಕವಾಗಿದೆ. ಅದು ಸೇವಕನಿಗೂ ಸಹಾಯ ಮಾಡುವುದಿಲ್ಲ, ಮಾಲೀಕನಿಗೂ ಸಹಾಯ ಮಾಡುವುದಿಲ್ಲ.
ಸಿಟ್ಟು ಅಹಿಂಸೆಯ ವೈರಿ ಮತ್ತು ಹೆಮ್ಮೆ ಅದನ್ನು ನುಂಗಿ ಹಾಕುವ ದೈತ್ಯ.
ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
ಪ್ರೀತಿಯನ್ನು ಪ್ರದರ್ಶಿಸುವಲ್ಲಿ ಹೇಡಿಗಳು ಅಸಮರ್ಥರಾಗಿದ್ದಾರೆ. ಇದು ಧೈರ್ಯಶಾಲಿಗಳ ಅಧಿಕಾರವಾಗಿದೆ.
ಅಶಕ್ತ ಎಂದೂ ಕ್ಷಮಿಸಲಾರ. ಕ್ಷಮೆ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯದ ಸಂಕೇತವಿದ್ದಂತೆ.
ಎಲ್ಲಿ ಪ್ರೀತಿಯಿದೆಯೋ ಅಲ್ಲೇ ಜೀವನವಿದೆ.
ನೀವು ಎದುರಾಳಿಯನ್ನು ಎದುರಿಸಿದಾಗೆಲ್ಲ ಅವನನ್ನು ಪ್ರೀತಿಯಿಂದ ಜಯಿಸಿ.
ನೀವು ನಾಳೆ ಸಾಯುವವರಿದ್ದೀರಿ ಎಂಬಂತೆ ಬದುಕಿ. ಶಾಶ್ವತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಯಿರಿ.
ಇವತ್ತು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ನಾಳೆ ನಿಂತಿದೆ.
ಕಣ್ಣಿಗೆ ಕಣ್ಣನ್ನು ಕೀಳುತ್ತಾ ಹೋದರೆ ಒಂದಿನ ಜಗತ್ತು ಕುರುಡಾಗುತ್ತದೆ.
ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು. ಆದರೆ ದುರಾಸೆಗಳನ್ನಲ್ಲ.
ಒಂದು ಒಳ್ಳೆ ಕೆಲಸದಿಂದ ಒಂದು ಹೃದಯಕ್ಕೆ ಸಂತೋಷವನ್ನು ನೀಡುವುದು ಪ್ರಾರ್ಥನೆಯಲ್ಲಿ ತಲೆಬಾಗುವ 1000 ತಲೆಗಳಿಗಿಂತ ಉತ್ತಮವಾಗಿದೆ.
ಆ ದೇವರಿಗೆ ಯಾವುದೇ ಧರ್ಮವಿಲ್ಲ.
ತಮ್ಮ ಕೊಳೆಯಾದ ಕಾಲುಗಳಿಂದ ನನ್ನ ಹೃದಯದ ದಾರಿಯಲ್ಲಿ ನಡೆಯುವ ಅವಕಾಶವನ್ನು ನಾನು ಯಾರಿಗೂ ಕೊಡುವುದಿಲ್ಲ.
ಸ್ವಾತಂತ್ರ್ಯ ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಕೊಡದಿದ್ದರೆ ಅದು ಯೋಗ್ಯವಾಗಿಲ್ಲ.
ಆರೋಗ್ಯವೇ ನಿಜವಾದ ಸಂಪತ್ತಾಗಿದೆ. ಬಂಗಾರ ಬೆಳ್ಳಿಯ ತುಣುಕುಗಳಲ್ಲ.
ದೈಹಿಕ ಸಾಮರ್ಥದಿಂದ ಶಕ್ತಿ ಬರುವುದಿಲ್ಲ. ಅದು ಅದಮ್ಯ ಇಚ್ಛೆಯಿಂದ ಬರುತ್ತದೆ.