KAS Prelims Paper-2 (2020) Online Exam in Kannada

5/5 - (6 votes)
KAS Prelims Paper-2 (2020) Online Exam in Kannada
KAS Prelims Paper-2 (2020) Online Exam in Kannada

KAS Prelims Paper-2 Online Exam in Kannada 2020, KPSC KAS Online Exam in Kannada

  • 2020 ರಲ್ಲಿ ನಡೆದ KAS ಪೂರ್ವಭಾವಿ ಪರೀಕ್ಷೆ ಪೇಪರ್-2 ರ ಆನ್ ಲೈನ್ ಪರೀಕ್ಷೆ
  • ಎಲ್ಲ ಪ್ರಶ್ನೆಗಳು 2020 ರಂದು ನಡೆದ KAS ಪೂರ್ವಭಾವಿ ಪರೀಕ್ಷೆ ಪೇಪರ್-2 ರ ಪ್ರಶ್ನೆಗಳಾಗಿರುತ್ತವೆ
  • ಒಟ್ಟು 2 ಗಂಟೆಗಳು
  • ಕೆಳಗೆ ಇರುವ Start ಬಟನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಪರೀಕ್ಷೆ ಪ್ರಾರಂಭಿಸಿ

KAS Prelims Paper-2 (2020) Online Exam in Kannada

1 / 100

1) ಕರ್ನಾಟಕ ಸರ್ಕಾರವು ಇತ್ತೀಚೆಗೆ ಮಲೆನಾಡು ಪ್ರದೇಶದಲ್ಲಿ_______ಬೆಳೆಯುವಿಕೆಯನ್ನು ನಿಷೇಧಿಸಿದೆ.

2 / 100

2) ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಗೆ ಈ ಕೆಳಗಿನವುಗಳಲ್ಲಿ ಯಾವುದು /ಯಾವುದು ಅಪಾಯಕಾರಿಯಾಗಿದೆ?
A.ಹೆಚ್ಚುತ್ತಿರುವ ನೀರಿನ ಮೇಲ್ಮೈ ಉಷ್ಣತೆ
B.ಕ್ರೌನ್ -ಆಫ್- ಥ್ರೋನ್ಸ್ ನಕ್ಷತ್ರಮೀನುಗಳು
C.ತೈಲ ಸಾಗಾಣಿಕೆಗಳು
D.ಪ್ರವಾಸೋದ್ಯಮ
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

3 / 100

3) ಕರ್ನಾಟಕ ಸರ್ಕಾರವು 6ನೇ ಅಕ್ಟೋಬರ್, 2018 ರಂದು ಅಂಚಿನಲ್ಲಿರುವ ಹಿನ್ನೆಲೆಯಿಂದ ಬಂದ ಉದ್ಯಮಿಗಳಿಗಾಗಿ ಮತ್ತು ಸ್ಟಾರ್ಟ್ ಅಪ್ (Startup) ಗಳಿಗೆ ಎಂಡ್ ಟು ಎಂಡ್ (End- to – End) ಮೂಲಸೌಕರ್ಯಗಳನ್ನು ಸೃಷ್ಟಿಸುವ ಸಲುವಾಗಿ ಪ್ರಾರಂಭಿಸಿರುವ ಯೋಜನೆಯನ್ನು_______ಎಂದು ಕರೆಯಲಾಗುವುದು.

4 / 100

4) 2019ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಪುರಾತತ್ವಜ್ಞರು ಯಾರು?

5 / 100

5) ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಾಣಕ್ಕೆ ಅನುಮತಿಸಲಾಗಿರುವ ಗರಿಷ್ಠ ವಿಸ್ತೀರ್ಣವೆಷ್ಟು?

6 / 100

6) 2016ರ ಘನ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು______ಅವಕಾಶಗಳನ್ನಾಧರಿಸಿ ಅಧಿಸೂಚಿಸಲಾಗಿದೆ.

7 / 100

7) ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರ ಪೌಷ್ಠಿಕತೆಯ ಅವಶ್ಯಕತೆಗಳನ್ನು ಪೂರೈಸಲು ಕರ್ನಾಟಕ ರಾಜ್ಯ ಸರಕಾರವು ಜಾರಿಗೆ ತಂದ ಯೋಜನೆ_____

8 / 100

8) “ಪರಿಸರ ಅಭಿವೃದ್ಧಿ” ಎಂದರೆ_____

9 / 100

9) ಈ ಕೆಳಗಿನ ಪ್ರಶ್ನೆಗಳನ್ನು (9-11) ಕೆಳಗೆ ನೀಡಿರುವ ಮಾಹಿತಿಯನ್ನು ಆಧರಿಸಿ ಉತ್ತರಿಸಿ: ಎಲೇನರ್ ಭಾಷಣಕಾರರನ್ನು ಒಂದು ಮೇಜಿನಲ್ಲಿ ಕೂರಿಸುವ ಹೊಣೆ ಹೊತ್ತಿದ್ದಾರೆ. ಮಾಡರೇಟ್ ರೊಂದಿಗೆ ಹೆಚ್ಚುವರಿಯಾಗಿ ವಿಮಾನ ಚಾಲಕ, ಒಬ್ಬ ಲೇಖಕ, ಅಟಾರ್ನಿ ಮತ್ತು ಅನ್ವೇಷಕ ಇದ್ದಾರೆ. ಭಾಷಣಕಾರರ ಹೆಸರುಗಳು ಗ್ಯಾರಿ, ಹೆಲಾಯ್ಸ್, ಜರೋಡ್, ಕೇಟ್ ಮತ್ತು ಲೆನ್.
• ಸಮನ್ವಯಕಾರರು (ಮಾಡರೇಟರ್) 3ನೇ ಆಸನದ ಮಧ್ಯದಲ್ಲಿ ಕುಳಿತಿರಬೇಕು.
• ಅಟಾರ್ನಿ ಅನ್ವೇಷಕರ ಬದಿ ಕುಳಿತಿರಲಾರರು.
• ಲೆನ್ ವಿಮಾನಚಾಲಕ.
• ಲೇಖಕ ಮತ್ತು ಅಟಾರ್ನಿ ಸಮನ್ವಯಕಾರರು ಎರಡೂ ಬದಿಗಳಲ್ಲಿ ಕುಳಿತಿರಬೇಕು.
• ಹೆಲಾಯ್ಸ್ ಕೇಟ್ ಮತ್ತು ಜರೋಡ್ ಮಧ್ಯದಲ್ಲಿ ಕುಳಿತಿರುವವರು ಆದರೆ ಸಮನ್ವಯಕಾರರಲ್ಲ.
• ಜರೋಡ್ ಅಥವಾ ಲೇನ್ ಪಕ್ಕದಲ್ಲಿ ಸಮನ್ವಯಕಾರರು ಕೂರುವುದಿಲ್ಲ.
• ಅಟಾರ್ನಿಾದ ಗ್ಯಾರಿಯವರು 4ನೇ ಆನದಲ್ಲಿ ಕುಳಿತಿದ್ದಾರೆ.

9. ಸಮನ್ವಯಕಾರ ಯಾರು?

10 / 100

10) ಜರೋಡ್ ಎಲ್ಲಿ ಕುಳಿತುಕೊಳ್ಳುವರು?

11 / 100

11) ಜರೋಡ್ ರ ವೃತ್ತಿ ಏನು ?

12 / 100

12) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
A.ಗಂಗಾ ನದಿಯ ನೀರಿನ ಗುಣಮಟ್ಟವನ್ನು ಮರಳಿ ಪೂರ್ವಸ್ಥಿತಿಗೆ ತರುವ ಕಾರ್ಯಕ್ರಮದ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗಾಗಿ ಕೇಂದ್ರ ಗಂಗ ಪ್ರಾಧಿಕಾರವನ್ನು ಫೆಬ್ರುವರಿ 1985ರಲ್ಲಿ ರಚಿಸಲಾಯಿತು.
B.ಪ್ರಾಧಿಕಾರವು ರಾಷ್ಟ್ರಾಧ್ಯಕ್ಷರ ಅಧ್ಯಕ್ಷತೆಯನ್ನು ಗಂಗಾ ಕಾರ್ಯಯೋಜನೆಯ ಒಟ್ಟಾರೆ ನಿಯಮಿತ ಅವಧಿಗಳಲ್ಲಿ ಪುನರಾವಲೋಕನ ಮಾಡುವುದು ಮತ್ತು ಮಾರ್ಗದರ್ಶನ ಒದಗಿಸುವುದು.
ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ? ಕೆಳಗೆ ನೀಡಲಾದ ಅರ್ತಿಗಳಿಂದ ಸರಿಯಾದ ಉತ್ತರವನ್ನು ಆರಿಸಿ:

13 / 100

13) ಕರ್ನಾಟಕ ಸರ್ಕಾರವು ಮೇ 2019 ರಲ್ಲಿ ಒಂದು ಆದೇಶವನ್ನು ಹೊರಡಿಸಿ, ಸರಕಾರಿ, ಅನುದಾನಿತ ಮತ್ತು ಅನುದಾನವಲ್ಲದ ಎಲ್ಲ ಸಂಸ್ಥೆಗಳು/ ಶಾಲೆಗಳನ್ನು ಒಳಗೊಂಡಂತೆ ರಾಜ್ಯದ ಎಲ್ಲ ಶಾಲೆಗಳು, ಶಾಲಾ ಚೀಲದ ತೂಕವು ಮಗುವಿನ ತೂಕದ ಶೇಕಡಾ ಎಷ್ಟರಕ್ಕಿಂತ ಹೆಚ್ಚಾಗಿರಬಾರದು ಎನ್ನುವುದನ್ನು ಖಾತ್ರಿ ಪಡಿಸಬೇಕೆಂದು ನಿರ್ದೇಶಿಸಿದೆ?

14 / 100

14) 1964ರ ಕರ್ನಾಟಕ ಮುನಿಸಿಪಾಲಿಟಿಗಳ ಕಾಯ್ದೆ ಪ್ರಕಾರ ನಗರ ಮುನಿಸಿಪಲ್ ಪರಿಷತ್ತಿನ ಅಧ್ಯಕ್ಷರ ಸೇವಾವಧಿಯು_____

15 / 100

15) ಒಂದು ಹೊಸ ಜಾತಿಯ ಗೆಕ್ಕೋ, ಒಂದು ವಿಧದ ಹಲ್ಲಿಯೂ ಸಾಮಾನ್ಯವಾಗಿ ಉಷ್ಣ ವಾತಾವರಣದಲ್ಲಿ ಕಂಡುಬರುವುದು. ಇದನ್ನು ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದವರು______ಇಲ್ಲಿ ಗುರುತಿಸಿದರು.

16 / 100

16) 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ ಕೆಳಗಿನ ಅವರಲ್ಲಿ ಯಾರು?

17 / 100

17) ದೇವರಾಜ ಅರಸ್ ಗೃಹ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಿ:
A.ಫಲಾನುಭವಿ ವಾರ್ಷಿಕ ಆದಾಯವು ಅಥವಾ ₹ 32,000/- ಅಥವಾ ಅದಕ್ಕಿಂತ ಕಡಿಮೆ ಇರಬೇಕು.
B.ಸ್ಥಳೀಯ MLA ಅಧ್ಯಕ್ಷರಾಗಿರುವ ಜಿಲ್ಲಾ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.
ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

18 / 100

18) ರಾಜೀವ್ ಆವಾಸ್ ಯೋಜನೆ ಅಡಿಯಲ್ಲಿ_______ವರ್ಷಕ್ಕೆ ಕೊಳಗೇರಿ ಮುಕ್ತ ರಾಜ್ಯವಾಗಿಸಲು ಕರ್ನಾಟಕವನ್ನು ಆಯ್ಕೆ ಮಾಡಲಾಗಿದೆ.

19 / 100

19) ಈ ಕೆಳಗಿನ ಯಾವ ಬ್ಯಾಂಕ್ ಕರ್ನಾಟಕದ ಹೆದ್ದಾರಿಗಳ ಮೇಲ್ದರ್ಜೆಗೇರಿಸುವಿಕೆ ಯೋಜನೆಗೆ $ 346 ಮಿಲಿಯನ್ ಸಾಲವನ್ನು ಅನುಮೋದಿಸಿದೆ?

20 / 100

20) ಈ ಗುಂಪಿನ ತಾರ್ತಿಕ ಸಮಸ್ಯೆಗಳು (20-24) ಮೂರು ಹೇಳಿಕೆಗಳನ್ನು ಒಳಗೊಂಡವು ಸತ್ಯ ಸಂಗತಿ 1,ಸತ್ಯ ಸಂಗತಿ 2, ಮತ್ತು ಸತ್ಯ ಸಂಗತಿ 3 ನಂತರ ನಿಮಗೆ ಮೂರು ಹೇಳಿಕೆಗಳನ್ನು ನೀಡಿದೆ, (ಮತ್ತು ಎಂದು ಹೆಸರಿಸಲಾಗಿದೆ) ಮತ್ತು ಇವುಗಳಲ್ಲಿ ಯಾವುದು, ಯಾವುದಾದರೂ ಇದ್ದಲ್ಲಿ ಯಾವುದು ಸತ್ಯ ಸಂಗತಿ ಎಂದು ನಿರ್ಧರಿಸಬೇಕು ಎಂಬುದು ಸಹ ಒಂದು ಸತ್ಯ ಸಂಗತಿ. ಒಂದು ಅಥವಾ ಎರಡು ಹೇಳಿಕೆಗಳು ನಿಜವಿರಬಹುದು. ಎಲ್ಲ ಹೇಳಿಕೆಗಳು ನಿಜ ಇರಬಹುದು ಅಥವಾ ಯಾವ ಹೇಳಿಕೆಗಳು ನಿಜವಲ್ಲದಿರಬಹುದು.

ಸತ್ಯ ಸಂಗತಿ 1: ಜೆಸಿಕಾಗೆ ನಾಲ್ಕು ಮಕ್ಕಳು.
ಸತ್ಯ ಸಂಗತಿ 2: ಎರಡು ಮಕ್ಕಳು ನೀಲಿಕಣ್ಣಿನವರು ಮತ್ತು ಎರಡು ಮಕ್ಕಳು ಕಂದು ಕಣ್ಣಿನವರು.
ಸತ್ಯಸಂಗತಿ 3 : ಅರ್ಧ ಮಕ್ಕಳು ಹುಡುಗಿಯರು.

ಮೊದಲು ಮೂರು ಹೇಳಿಕೆಗಳಲ್ಲಿ ಸತ್ಯ ಸಂಗತಿಗಳಾದರೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಹೇಳಿಕೆಯು ಸತ್ಯಸಂಗತಿ?
I.ಕನಿಷ್ಠ ಒಂದು ಹುಡುಗಿ ನೀಲಿ ಕಲ್ಲುಗಳನ್ನು ಹೊಂದಿದ್ದಾಳೆ.
II.ಇಬ್ಬರು ಮಕ್ಕಳು ಹುಡುಗರು.
III.ಹುಡುಗಿಯರಿಗೆ ಕಂದು ಕಣ್ಣುಗಳಿವೆ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

21 / 100

21) ಸತ್ಯ ಸಂಗತಿ 1: ಎಲ್ಲಾ ಹ್ಯಟುಗಳಿಗೂ ಅಂಚು ಇದೆ. ಸತ್ಯ ಸಂಗತಿ 2 : ಕಪ್ಪು ಮತ್ತು ನೀಲಿ ಹ್ಯಟುಗಳಿವೆ. ಸತ್ಯಸಂಗತಿ 3 : ಬೇಸ್ ಬಾಲ್ ಟೋಪಿಗಳು ಹ್ಯಾಟುಗಳು ಮೊದಲ ಮೂರು ಹೇಳಿಕೆಗಳು ಸತ್ಯಸಂಗತಿಗಳಾದರೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯೂ ಸಹ ಒಬ್ಬ ಸತ್ಯ ಸಂಗತಿ?
I.ಎಲ್ಲಾ ಟೋಪಿಗಳಿಗೂ ಅಂಚೆ ಇದೆ.
II.ಕೆಲವು ಬೇಸ್ ಬಾಲ್ ಟೋಪಿಗಳು ನೀಲಿ.
III.ಬೇಸ್ ಬಾಲ್ ಟೋಪಿಗಳಿಗೆ ಅಂಚು ಇಲ್ಲ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

22 / 100

22) ಸತ್ಯ ಸಂಗತಿ 1 : ಎಲ್ಲ ಕೋಳಿ ಮರಿಗಳು ಹಕ್ಕಿಗಳು.
ಸತ್ಯ ಸಂಗತಿ 2 : ಕೆಲವು ಕೋಳಿಮರಿಗಳು ಕೋಳಿಗಳು.
ಸತ್ಯಸಂಗತಿ 3 : ಹೆಣ್ಣು ಹಕ್ಕಿಗಳು ಮೊಟ್ಟೆ ಇಡುತ್ತವೆ. ಮೊದಲ ಮೂರು ಹೇಳಿಕೆಗಳು ಸತ್ಯಸಂಗತಿಗಳಾದರೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಸತ್ಯ ಸಂಗತಿ?
I.ಎಲ್ಲ ಹಕ್ಕಿಗಳೂ ಮೊಟ್ಟೆಯಿಡುತ್ತವೆ.
II.ಕೋಳಿಗಳು ಹಕ್ಕಿಗಳು.
III.ಕೆಲವು ಕೋಳಿಮರಿಗಳು ಕೋಳಿಗಳಲ್ಲ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ:

23 / 100

23) ಸತ್ಯ ಸಂಗತಿ 1 : ಬಹುತೇಕ ತುಂಬಿಸಿದ ಗೊಂಬೆಗಳು ಬೀನ್ಸ್ ಗಳಿಂದ ತುಂಬಿದವು. ಸತ್ಯಸಂಗತಿ 2 : ತುಂಬಿರಿಸಿದ ಕರಡಿಗಳು ಮತ್ತು ತುಂಬಿರಿಸಿದ ಹುಲಿಗಳಿವೆ. ಸತ್ಯಸಂಗತಿ 3 : ಕೆಲವು ಕುರ್ಚಿಗಳನ್ನು ಬೀನ್ಸ್ ಗಳೆಂದ ತುಂಬಿರಿಸಲಾಗಿದೆ. ಮೊದಲ ಮೂರು ಹೇಳಿಕೆಗಳು ಸತ್ಯ ಸಂಗತಿಗಳಾದರೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಸತ್ಯ ಸಂಗತಿ? I.ಮಕ್ಕಳ ಕುರ್ಚಿಗಳನ್ನು ಮಾತ್ರ ಬೀನ್ಸ್ ಗಳಿಂದ ತುಂಬಿಸಲಾಗಿದೆ.
II.ಎಲ್ಲ ತುಂಬಿದ ಹುಲಿಗಳನ್ನು ಬೀನ್ಸ್ ಗಳಿಂದ ತುಂಬಿರಿಸಲಾಗಿದೆ.
III.ತುಂಬಿರಿಸಿದ ಕೋತಿಗಳು ಬೀನ್ಸ್ ಗಳಿಂದ ತುಂಬಿಸಲಾಗಿಲ್ಲ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

24 / 100

24) ಸತ್ಯ ಸಂಗತಿ 1 : ಚಿತ್ರಗಳಲ್ಲೊಂದು ಕಥೆಗಳನ್ನು ಹೇಳಬಲ್ಲವು.
ಸತ್ಯಸಂಗತಿ 2 : ಎಲ್ಲ ಕತೆ ಪುಸ್ತಕಗಳು ಚಿತ್ರವನ್ನು ಹೊಂದಿರುತ್ತದೆ.
ಸತ್ಯಸಂಗತಿ 3 : ಕೆಲವು ಕತೆ ಪುಸ್ತಕಗಳು ಪದಗಳನ್ನು ಹೊಂದಿರುತ್ತದೆ.
ಮೊದಲ ಮೂರು ಹೇಳಿಕೆಗಳು ಸತ್ಯಸಂಗತಿಗಳಾದರೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯೂ ಸಹ ಒಂದು ಸತ್ಯ ಸಂಗತಿ?
I.ಚಿತ್ರಗಳು ಪದಗಳು ಹೇಳಿವುದ್ದಕ್ಕಿಂತ ಕಥೆಯನ್ನು ಚೆನ್ನಾಗಿ ಹೇಳಬಲ್ಲವು.
II.ಕತೆ ಪುಸ್ತಕದಲ್ಲಿರುವ ಕತೆಗಳು ಅತ್ಯಂತ ಸರಳ.
III.ಕೆಲವು ಕತೆ ಪುಸ್ತಕಗಳು ಚಿತ್ರ ಹಾಗೂ ಪದಗಳೆರಡನ್ನೂ ಹೊಂದಿವೆ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ.

25 / 100

25) 2020ರಲ್ಲಿ ಕರ್ನಾಟಕ ಸರ್ಕಾರವು ‘ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು’ ಯೋಜನೆಯನ್ನು ಕರ್ನಾಟಕದ ನಾಗರಿಕರಿಗಾಗಿ ಪ್ರಾರಂಭಿಸಿತು. ಈ ಯೋಜನೆಯ ಹೆಸರು

26 / 100

26) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಹೇಳಿಕೆ (A) : ಉಷ್ಣವಲಯದ ಮಳೆಕಾಡುಗಳು ಅಭಿವೃದ್ಧಿಶೀಲ ಭಾರತದಂತಹ ದೇಶಗಳಲ್ಲಿ ವೇಗವಾಗಿ ಕಣ್ಮರೆಯಾಗುತ್ತಿವೆ.
ಕಾರಣ (R) : ಅವು ಜೀವಿ ವೈವಿಧ್ಯತೆಯನ್ನು ಬಡವರಾಗಿರುವುದರಿಂದ ಹೆಚ್ಚಿನ ಮಹತ್ವವನ್ನು ಪಡೆದಿಲ್ಲ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

27 / 100

27) ಕರ್ನಾಟಕದಲ್ಲಿ “ಯಶಸ್ವಿನಿ” ಯೋಜನೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

28 / 100

28) ಈ ಕೆಳಕಂಡವರಲ್ಲಿ ಕರ್ನಾಟಕ ಸರಕಾರವು ಕೊಡಮಾಡುವ ‘2018ರ ಬಸವ ಪ್ರಶಸ್ತಿ’ಯನ್ನು ಪಡೆದವರು ಯಾರು?

29 / 100

29) ಇತ್ತೀಚೆಗೆ ನಿಧನರಾದ ಕನ್ನಡ ವಿದ್ವಾಂಸ, ಸಂಶೋಧಕ ಹಾಗೂ ಹಂಪಿಯಲ್ಲಿನ ಸ್ಮಾರಕಗಳ ರಕ್ಷಣೆಗಾಗಿ ಆಂದೋಲನ ಆರಂಭಿಸಿದ ವ್ಯಕ್ತಿಯ ಹೆಸರು .

30 / 100

30) ಧೂಮಪಾನ ತ್ಯಜಿಸಿದ ನಂತರ ವ್ಯಕ್ತಿಯ ಶ್ವಾಸಕೋಶ ಕೊಂಚ ಸುಧಾರಣೆ ಕಾಣಲು ಕಾರಣವೇನೆಂದರೆ_______

31 / 100

31) ಭಾರತದ ಸೂಪರ್ ಕಂಪ್ಯೂಟಿಂಗ್ ಗೆ ಸಂಬಂಧಪಟ್ಟಂತೆ ಈ ಕೆಳಗಿನವುಗಳ ಪೈಕಿ ಯಾವುದು/ವು ಸರಿ?
A.ಭಾರತದ ಸೂಪರ್ ಕಂಪ್ಯೂಟರ್ ಕಾರ್ಯಕ್ರಮವು 1980ರ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು.
B. PARAM8000 ಭಾರತದ ಮೊದಲ ಸೂಪರ್ ಕಂಪ್ಯೂಟರ್ ಎಂದು ಪರಿಗಣಿತವಾಗಿದೆ.
C.ಆದಿತ್ಯ ಎನ್ನುವುದು ಬಾಬಾ ಪರಮಾಣು ಸಂಶೋಧನಾ ಕೇಂದ್ರದಿಂದ ವಿನ್ಯಾಸಿಸಲಾದ ಮತ್ತು ಅಭಿವೃದ್ಧಿಗೊಳಿಸಲಾದ ಸೂಪರ್ ಕಂಪ್ಯೂಟರ್ ಗಳ ಒಂದು ಸರಣಿ ಅದನ್ನು ಅವರ ಆಂತರಿಕ ಬಳಕೆಗೆ ರೂಪಿಸಲಾಯಿತು.
ಕೆಳಗೆ ನೀಡಲಾದ ಆಯ್ಕೆಗಳಿಲ್ಲ ಸರಿಯಾದ ಉತ್ತರವನ್ನು ಆರಿಸಿ:

32 / 100

32) 84ನೇ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷತೆಯನ್ನು ವಹಿಸಿದವರು ಯಾರು?

33 / 100

33) 2019ನೇ ಸಾಲಿನಲ್ಲಿ ಬಯಲಾಟ ಕ್ಷೇತ್ರದಿಂದ (ಮುಕ್ತ/ ತೆರೆದ ಕ್ಷೇತ್ರ ನಾಟಕ) ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರು_____

34 / 100

34) ಮರಭೂಮಿ ಹಲ್ಲಿಗಳ ಪರಿಸರಕ್ಕೆ ಸಂಬಂಧಿಸಿದಂತೆ, ಮರುಭೂಮಿಯಲ್ಲಿನ ಹಲ್ಲಿಗಳ ಪರಿಸರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ನಾಲ್ಕು ಸ್ಥಿತಿಗಳಲ್ಲಿ (A-D) ಪರಿಗಣಿಸಿ ಮತ್ತು ಸರಿಯಾದ ಹೊಂದಾಣಿಕೆ ಜೋಡಿಯನ್ನು ಆಯ್ಕೆ ಮಾಡಿ.
A.ಅಧಿಕ ತಾಪದಿಂದ ತಪ್ಪಿಸಿಕೊಳ್ಳಲು ಮಣ್ಣಿನೊಳಗೆ ಹುದುಗಿಕೊಳ್ಳುವಿಕೆ.
B.ಅಧಿಕತ ತಾಪದ ಅವಧಿಯಲ್ಲಿ ದೇಹದಿಂದ ವೇಗವಾಗಿ ಉಷ್ಣ ಕಳೆದುಕೊಳ್ಳುವುದು.
C.ತಾಪ ಕಡಿಮೆ ಇದ್ದಾಗ ಸೂರ್ಯನ ಬಿಸಿಲು ಕಾಯಿಸಿಕೊಳ್ಳುವುದು.
D.ಅಧಿಕ ಕೊಬ್ಬಿನಂಶವಿರುವ ಒಳಚರ್ಮದಿಂದ ನಿರೋಧಿಸುವುದು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

35 / 100

35) ನಂದಿತಾ ನಾಗನಗೌಡರ್ ಯಾವ ಕ್ರೀಡೆಗೆ ಸಂಬಂಧಿಸಿದವರು?

36 / 100

36) ಭಾರತದ ಖಗೊಳಶಾಸ್ತ್ರಜ್ಞ ಒಂದು ತಂಡವು ಈ ಮುಂಚೆ ಗೊತ್ತಿರದ ಅತಿದೊಡ್ಡ ಅಧಿ ನಕ್ಷತ್ರಗುಚ್ಛ ಗ್ಯಾಲಕ್ಸಿಯನ್ನು ಮೀನರಾಶಿಯ ನಕ್ಷತ್ರಪುಂಜದ ದಿಕ್ಕಿನಲ್ಲಿ ಸ್ಥಿರವಾಗಿರುವುದನ್ನು ಗುರುತಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು/ ಗಳು ಸರಿ?
A.ಅದಕ್ಕೆ “ಸರಸ್ವತಿ” ಎಂದು ಹೆಸರಿಸಲಾಗಿದೆ.
B.ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರಾನಮಿ ಅಂಡ್ ಅಸ್ಟ್ರೋಟ್ರೋಫಿಕ್ಸ್ (IU-CAA) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್ (IISER) ಈ ಎರಡು ಸಂಸ್ಥೆಗಳ ಖಗೋಳಶಾಸ್ತ್ರಜ್ಞರಿಂದ ಆವಿಷ್ಕಾರವಾಗಿದೆ.
C.ಇದು ಅಂತರದಲ್ಲಿ 650 ಮಿಲಿಯ ಜ್ಯೋತಿರ್ವರ್ಷಕ್ಕೂ ಮಿಗಿಲಾದ ದೂರದವರೆಗೆ ಚಾಚಿದೆ ಎಂದು ಅಂದಾಜಿಸಲಾಗಿದೆ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

37 / 100

37) “ನ್ಯೂಕ್ಲಿಯರ್ ಇಂಧನದ ಚಕ್ರ”ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳ ಪೈಕಿ ಯಾವುದು/ವು ಸರಿ?
A.ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳಲ್ಲಿ ಯುರೇನಿಯಂನಿಂದ ವಿದ್ಯುತ್ ಉತ್ಪಾದನೆ ಮಾಡಲು ಒಳಗೊಳ್ಳಲು ಕೈಗಾರಿಕಾ ಪ್ರಕ್ರಿಯೆಗಳ ಸರಣಿ.
B.ನ್ಯೂಕ್ಲಿಯರ್ ಇಂಧನದ ಚಕ್ರವು ಯುರೋನಿಯಂ ಗಣಿಗಾರಿಕೆ ಮೊದಲುಗೊಂಡು ಮತ್ತು ನ್ಯೂಕ್ಲಿಯರ್ ತ್ಯಾಜ್ಯ ವಿಲೆಯಲ್ಲಿ ಮುಕ್ತಾಯವಾಗುತ್ತದೆ.
C.ಒಂದು ನ್ಯೂಕ್ಲಿಯರ್ ಸ್ಥಾವರದಲ್ಲಿ ಬಳಕೆಯಾಗಿ ಯುರೇನಿಯಂನ್ನು ಸಿದ್ಧಪಡಿಸುವುದು. ಅದು ಗಣಿಗಾರಿಕೆ, ಮಡಿ ಮಾಡುವಿಕೆ, ಪರಿವರ್ತನೆ ಸಂವೃದ್ಧಿಕರಣ ಮತ್ತು ಇಂಧನ ತಯಾರಿಕೆಯ ಹಂತಗಳು ಒಳಗಾಗುವುದು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

38 / 100

38) ಈ ಗುಂಪಿನಲ್ಲಿ ನೀಡಿರುವ ಪ್ರಶ್ನೆಗೆ (38-42) ನಿರ್ದಿಷ್ಟ ಸಂದರ್ಭಕ್ಕೆ ಹೊಂದಿಕೆಯಾಗುವ ವ್ಯಾಖ್ಯಾನಗಳನ್ನು ಹೊಂದಿಸಲು ಕೇಳುವಂತಹುದಾಗಿದೆ. ಪ್ರತಿ ಪ್ರಶ್ನೆಗೂ ಒಂದು ವ್ಯಾಖ್ಯಾನ ಮತ್ತು ನಾಲ್ಕು ಸಾಧ್ಯತೆಯೂ ಉತ್ತರವನ್ನು ಆಯ್ಕೆ ನೀಡಲಾಗಿದೆ. ಪ್ರತಿ ವಾಕ್ಯವನ್ನು ಮತ್ತು ನಾಲ್ಕು ಆಯ್ಕೆಗಳನ್ನು ಎಚ್ಚರದಿಂದ ಓದಿ ನೀಡಿರುವ ವ್ಯಾಖ್ಯಾನಕ್ಕೆ ಅತ್ಯುತ್ತಮ ಉದಾರಣೆಯನ್ನು ಒದಗಿಸುವ ಉತ್ತರವನ್ನು ಕಂಡು ಹಿಡಿಯಿರಿ.

ಗೃಹ ಸಮುಚ್ಚಯದ ಕರಾರನ್ನು ಮೀರುವುದೆಂದರೆ ಬಾಡಿಗೆದಾರರು ಅವನು/ ಅವಳು ತನ್ನ ಭೂ ಒಡೆಯ ನೊಂದಿಗೆ ಸಹಿ ಮಾಡಿದ ಕಾನೂನುಬದ್ಧ ದಾಖಲೆಯನ್ನು ಬಹಿಷ್ಕರಿಸಿದಾಗ ಉದ್ಭವಿಸುವುದು. ಈ ಕೆಳಗಿನ ಸಂದರ್ಭಗಳ ಪೈಕಿ ಗೃಹ ಸಮುಚ್ಚಯದ ಗುತ್ತಿಗೆ ಕರಾರು ಭಂಗ ಮಾಡಿದ್ದಕ್ಕೆ ಅತ್ಯುತ್ತಮ ಉದಾಹರಣೆ ಯಾವುದು?

39 / 100

39) ನೀವು ಎಂದಾದರೂ (ಅವನ/ಅವಳ) ಆಸ್ತಿಗೆ ಯಾವುದಾದರೂ ರೀತಿಯಲ್ಲಿ ಜಖಂ ಮಾಡಿದ್ದಾರೆ ಪರಿಹಾರ ನೀಡುವುದು ಸಮಂಜಸ. ಇದನ್ನು ಮರು ಪ್ರಧಾನ (ನಷ್ಟಭರ್ತಿ) ಎಂದು ಕರೆಯುವರು. ಈ ಕೆಳಗಿನ ಯಾವ ಸಂದರ್ಭ ಮರು ಪ್ರಧಾನಕ್ಕೆ ಉತ್ತಮ ಉದಾಹರಣೆ?

40 / 100

40) ಅನಿರ್ಣಾಯಕ ಪುರಾವೆಯಿಂದ ಜನ ಒಂದು ಸಂದರ್ಭವನ್ನು ಕುರಿತು ಏನನ್ನೂ ಊಹಿಸಿ ಅದೇ ನಿಜವೆಂದು ಊಹಿಸುತ್ತಾರೆ. ಈ ಕೆಳಗಿನ ಯಾವ ಸಂದರ್ಭಗಳು ಊಹಿಸುವಿಕೆಯ ಅತ್ಯುತ್ತಮ ಉದಾಹರಣೆಯಾಗಿದೆ.

41 / 100

41) ಖಾತರಿ ಎಂದರೆ ವಚನ ನೀಡುವುದು ಇಲ್ಲವೇ ಭರವಸೆ ಮೂಲಕ ಉತ್ಪನ್ನವೊಂದರ ಗುಣಮಟ್ಟವನ್ನು ಉತ್ಪಾದಕರಿಂದ ಲಿಖಿತವಾಗಿ ಅಥವಾ ಮೌಖಿಕವಾಗಿ ಉತ್ಪನ್ನವನ್ನು ಮಾರುವಂತೆ ತಿಳಿಸುವುದು. ಈ ಪೈಕಿ ಖಾತರಿಗೆ ಅತ್ಯುತ್ತಮ ಉದಾಹರಣೆಯಾದ ಸಂದರ್ಭ ಯಾವುದು?

42 / 100

42) ಸತ್ಯವನ್ನು ಅದ್ದೂರಿಕರಿಸುವುದೆಂದರೆ ವ್ಯಕ್ತಿಯು ಕಾಲ್ಪನಿಕ ವಿವರ ಸೇರಿಸುವುದು ಅಥವಾ ಇರುವ ಅಂಶಗಳನ್ನು ಅಥವಾ ಸತ್ಯದ ಕಥೆಗಳನ್ನು ಉತ್ಪ್ರೇಕ್ಷಿಸಿದಾಗಿ ಈ ಕೆಳಗಿನವುಗಳ ಪೈಕಿ ಯಾವುದು ಸತ್ಯದ ಅದ್ದೂರಿಕರಣಕ್ಕೆ ಉತ್ತಮ ಉದಾಹರಣೆ ?

43 / 100

43) ಈ ಕೆಳಗಿನ ಭಾಗವನ್ನು ಓದಿ ಪ್ರಶ್ನೆ ಸಂಖ್ಯೆ (43-44) ಕ್ಕೆ ಉತ್ತರಿಸಿ: ಮಹಾತ್ಮಗಾಂಧಿಯವರು ಕೈಗಾರೀಕರಣವೇ ಭಾರತದ ಬಹುಸಂಖ್ಯಾತ ಬಡವರ ಸಮಸ್ಯೆಗೆ ಉತ್ತರವಲ್ಲವೆಂದು ಹಾಗೂ ಗ್ರಾಮೀಣರಿಗೆ ಆಹಾರದಲ್ಲಿ ಸ್ವಾವಲಂಬನೆ, ಹೊಂದುವುದನ್ನು, ಹತ್ತಿಯಿಂದ ತಮ್ಮ ಬಟ್ಟೆಗಳನ್ನು ತಾವೇ ನೇಯುವುದನ್ನು ಹಾಗೂ 20ನೇ ಶತಮಾನವು ನೀಡುವ ಕಾಣಿಕೆಗಳನ್ನು ದೂರಿಕರಿಸಲು ಕಲಿಸಬೇಕೆಂದು ನಂಬಿದ್ದರು. ಅಂತ ಗ್ರಾಮೀಣ ಸೊಗಡು ಭರಿತ ಸ್ವರ್ಗವು ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಮನಸ್ಸಿಗೆ ಹಿಡಿಸಲಿಲ್ಲ.

43. ಗ್ರಾಮೀಣ ಕೈಗಾರಿಕೀಕರಣವನ್ನು ಗಾಂಧೀಜಿ ವಿರೋಧಿಸಲು ಕಾರಣ
A.ಅದು ಬಡವರ ಪರವೇ ವಿನಾ ಸಿರಿವಂತರ ಪರ ಅಲ್ಲ.
B.ಅದು ಗ್ರಾಮೀಣರ ಕೌಶಲ್ಯವನ್ನು ನಾಶಮಾಡುವುದು.
C.ಅದು ಭಾರತೀಯ ಸಂಸ್ಕೃತಿ ವಿನಾಶಕ.
D.ಅದು ಗ್ರಾಮೀಣ ಸೌಂದರ್ಯವನ್ನು ಹಾಳು ಮಾಡುವುದು.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

44 / 100

44) ಗಾಂಧೀಜಿಯವರ ಗ್ರಾಮೀಣ ಸೊಗಡಿನ ಸ್ವರ್ಗದ ಕನಸನ್ನು ಹಂಚಿಕೊಳ್ಳದವರು A.ದೆಶದ ಕೈಗಾರೀಕರಣವನ್ನು ನಂಬದವರು. B.ಗಾಂಧೀಜಿಯವರನ್ನು ರಾಷ್ಟ್ರಪಿತನೆಂದವರು. C.ಸ್ವಾತಂತ್ರ್ಯೋತ್ತರ ಅಧಿಕಾರವನ್ನು ಪಡೆದವರು. D.ಗ್ರಾಮಗಳು ಸ್ವಸಂಪೂರ್ಣವಲಂಬಿಗಳೆಂದು ನಂಬಿದರೂ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

45 / 100

45) ಸರಕುಗಳ ಭೌಗೋಳಿಕ ಸೂಚನೆ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999 ಕುರಿತಂತೆ ಈ ಹೇಳಿಕೆಗಳನ್ನು ಪರಿಗಣಿಸಿ:
A.ಅದನ್ನು ಕೃಷಿ, ನೈಸರ್ಗಿಕ ಮತ್ತು ಉತ್ಪಾದಿತ ಸರಕು ಮತ್ತು ಸೇವೆಗಳಿಗೆ ಬಳಕೆಮಾಡಲಾಗುವುದು.
B.ಉತ್ಪನ್ನವೊಂದಕ್ಕೆ ಭೌಗೋಳಿಕ ಸೂಚನೆ ಆಗಬೇಕಾದಲ್ಲಿ ಈ ಪ್ರದೇಶದಲ್ಲಿ ಸರಕಿನ ಉತ್ಪಾದನೆ, ಸಂಸ್ಕರಣೆ ಮತ್ತು ತಯಾರಿಕೆ ಆಗಬೇಕಾಗಿಲ್ಲ.
ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

46 / 100

46)

ಕೃಷಿ ಹವಾಮಾನ ಮತ್ತು ಸಂಶೋಧನಾ ಕೇಂದ್ರವು ಇರುವ ಸ್ಥಳ______

47 / 100

47) ಈ ಕೆಳಗಿನವುಗಳಲ್ಲಿ ಯಾವ ಬೆಳೆಯನ್ನು ಇತ್ತೀಚೆಗೆ ಭೌಗೋಳಿಕ ಸೂಚ್ಯಂಕ ಟ್ಯಾಗ್ ನೊಂದಿಗೆ ಅನುರೂಪಗೊಳಿಸಲಾಯಿತು (ಹೊಂದಿಕೆಗೊಳಿಸಿತು)?

48 / 100

48) ಈ ಕೆಳಗಿನವುಗಳಲ್ಲಿ ‘ಏರ್- ಟು- ಏರ್” ಕ್ಷಿಪಣಿ ಯಾವುದು?

49 / 100

49) ಪಟ್ಟಿ -I ಮತ್ತು ಪಟ್ಟಿ -II ನ್ನು ಹೊಂದಿಸಿ:
ಪಟ್ಟಿ-I ಪಟ್ಟಿ -II

A.ಜನಸಂಖ್ಯೆ

I.ಜಗತ್ತಿನ ಎಲ್ಲ ಜೀವಿ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿರುವ ಭೂಮಿಯ ಒಂದು ಭಾಗ

B.ಸಮುದಾಯ

II.ಒಂದು ಪ್ರದೇಶದಲ್ಲಿ ಕಂಡುಬರುವ ವಿವಿಧ ಪ್ರಭೇದಗಳಿಗೆ ಸೇರಿದ ವೈಯಕ್ತಿಕ ಗುಂಪುಗಳ ಜೋಡನೆ

C.ಜೀವಿಪರಿಸರ ವ್ಯವಸ್ಥೆಯು

III.ಒಂದು ಪ್ರದೇಶದಲ್ಲಿ ಕಂಡುಬರುವ ಒಂದೇ ಪ್ರಭೇದದ ವೈಯಕ್ತಿಕ ಗುಂಪು

D.ಜೀವಪರಿಸರ ಗೋಳ

IV.ಜೀವಿಗಳು ಮತ್ತು ಅವುಗಳ ಭೌತಿಕ ಪರಿಸರದ ಪರಸ್ಪರ ಒಡನಾಟ

V.ಪರಿಸರ ಆಧಾರಿತ ಜೀವಿವರ್ಗೀಕರಣ

ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

50 / 100

50) ಬೆಂಗಳೂರಿನಲ್ಲಿ ನಡೆದ 2019ರ 12ನೇ ಏರೋ ಇಂಡಿಯಾ ಶೋನ ಆಶಯವು_____

51 / 100

51) ಎರೆಗೊಬ್ಬರ ತಯಾರಿಕೆಗೆ ಬಳಕೆಯಾಗುವ ಎರೆಹುಳುಗಳು
A.ಐಸೇನಿಯಾ ಫೇಟಿಡಾ (Eisenia fetida)
B.ಲಂಬ್ರಿಕುಸ್ರುಬೆಲ್ಲುಸ್ (Lumbricus rubellus)
C.ಕೆನೋರ್ ಹಾಬ್ದಿಟಿಸೆಲಗನ್ಸ್ (Caenorhabditis elegans)
D.ಪ್ಲಾಟಿಹೆಲ್ಮಿಂತಿಸ್ (Platyhelminthes)
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

52 / 100

52) ನಿಷ್ಕೃಷ್ಟ ಕೃಷಿಯ ಒಂದು ವೈಜ್ಞಾನಿಕ ಪ್ರಯತ್ನವಾಗಿದ್ದು, ಇದು ಕೃಷಿ ನಿರ್ವಹಣೆಯನ್ನು ಸುಧಾರಿಸಲು______ಅನ್ವಯದಿಂದ ಮಾಡುವಂತಹದು.

53 / 100

53) ಕರ್ನಾಟಕ ಸರ್ಕಾರವು 2019ರ ಫೆಬ್ರುವರಿ 28 ರಲ್ಲಿ ಜಲಾಮೃತ ಯೋಜನೆಯನ್ನು ಚಾಲನೆಗೊಳಿಸಿತು.
A.ಜಲಕಾಯಗಳ ರಕ್ಷಣೆ ಮತ್ತು ಪುನರುಜ್ಜೀವನವನ್ನೊಳಗೊಂಡಂತೆ ಬರನಿರೋಧಕ ಪರಿಹಾರಗಳ ಮೇಲೆ ಯೋಜನೆಯು ಕೇಂದ್ರೀಕೃತಗೊಳಿಸಲಾಯಿತು.
B.ಕರ್ನಾಟಕದ ಜಲಸಂಪನ್ಮೂಲ ಇಲಾಖೆಯು ಜಲಾಮೃತ ಯೋಜನೆಯನ್ನು ಅನುಷ್ಠಾನಗೊಳಿಸುವ ನೋಡೆಲ್ ಇಲಾಖೆಯಾಗಿದೆ.
C.ಇದು ಒಂದು ಸಮುದಾಯ ಚಾಲಿತ ಯೋಜನೆಯಾಗಿದೆ.
D.ಯೋಜನೆಯಡಿಯ ಜಲಸಂರಕ್ಷಣಾ ಕಾರ್ಯತಂತ್ರವು ಒಳಗೊಳ್ಳುವುದು ಜಲಸಾಕ್ಷರತೆ, ಜಲಕಾಯಗಳ ಪುನರುಜ್ಜೀವನ ಮತ್ತು ನೀರು, ಅರಣ್ಯೀಕರಣದ ಬಗ್ಗೆ ಅರಿವು.
ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

54 / 100

54) ಈ ಕೆಳಗಿನ ಮಾಹಿತಿಯನ್ನು ಪರಿಗಣಿಸಿ ಪ್ರತಿ ಸಂಖ್ಯೆ (54-56)ಕ್ಕೆ ಉತ್ತರಿಸಿ:
ಐವರು ಮಹಿಳೆಯರು ಉದ್ಯಾನವನದ ಬೆಂಚಿನ ಮೇಲೆ ಛಾಯಾಚಿತ್ರ ತೆಗೆಸಿಕೊಳ್ಳಲು ಸಿದ್ಧವಾಗಿ ಕುಳಿತಿದ್ದಾರೆ. ಶೀನಾ ರಮ್ಯಾಳ ಎಡಕ್ಕೆ ಮತ್ತು ಬಲಕ್ಕೆ ಕುಳಿತಿದ್ದಾಳೆ. ಮೋನಿಕಾ ರಮ್ಯಾಳ ಬಲಕ್ಕೆ ಕುಳಿತಿದ್ದಾಳೆ. ರೀನಾ, ರಮ್ಯಾ ಮತ್ತು ಮೋನಿಕಾ ನಡುವೆ ಕುಳಿತಿದ್ದಾರೆ.

54. ರೀನಾಳ ನಿಕಟ ಬಲಭಾಗದಲ್ಲಿ ಕುಳಿತವರು ಯಾರು?

55 / 100

55) ಪಾರ್ಕಿನಲ್ಲಿ ಬೆಂಚಿನ ಮಧ್ಯದಲ್ಲಿರುವವರು ಯಾರು?

56 / 100

56) ರಮ್ಯಾಳ ನಿಕಟ ಎಡ ಪಕ್ಕದಲ್ಲಿ ಕುಳಿತವರು ಯಾರು?

57 / 100

57) ಶ್ರೀಹರಿ ನಟರಾಜ್ ರವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

58 / 100

58) “ರೇಡ್ ಡೇಟಾ ಬುಕ್” ಎಂಬುದು ಒಂದು ವಿರಳ ಹಾಗೂ ವಿಪತ್ತಿನಲ್ಲಿರುವ ಜಾತಿಗಳ ——— ಲಿಖಿತ ದಾಖಲೆಯಾಗಿದೆ.
A.ಪ್ರಾಣಿಗಳು
B.ಸಸ್ಯಗಳು
C.ಶಿಲೀಂದ್ರ
D.ಸಂಧಿಪದಿಗಳು
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

59 / 100

59) ಕೊಲ್ಚಿಸಿನ್ ಪ್ರತ್ಯಾಮ್ಲವನ್ನು______ನಿಂದ ಪಡೆಯಲಾಗಿದೆ.

60 / 100

60) ಎರಡು ಸಂಖ್ಯೆಗಳ ಗುಣಲಬ್ಧವು 47,915 ಮತ್ತು ಅವುಗಳ 37, ಆಗ ಅವುಗಳ ಮೊತ್ತವು.

61 / 100

61) ಈ ಕೆಳಗಿನ ಯಾವ ಗಾಯಕರನ್ನು ಅತ್ಯುತ್ತಮ ಮಹಿಳಾ ಹಿನ್ನಲೆ ಗಾಯಕಿ ಎಂದು 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಂದರ್ಭದಲ್ಲಿ ನಿರ್ಣಯಿಸಲಾಯಿತು?

62 / 100

62) ಹಾಲಿನ ಸಂಯೋಜನೆಯಲ್ಲಿ ಬೃಹತ್ ವೃತ್ಯಯನಗಳಾಗುತ್ತಿವೆ ಅಂತಹ ಸಂಯೋಜನೆಯ ವೃತ್ಯಯನಕ್ಕೆ ಕಾರಣವಾದ ಅಂಶಗಳು_____
A.ಕ್ಷೀರೋತ್ಪತ್ತಿಯ ಘಟ್ಟ
B.ಹಾಲು ಕರೆಯುವುದರ ನಡುವಣ ಅಂತರ
C.ಹಾಲುಕರೆಯುವ ಪರಿಸರಾತ್ಮಕ ಸ್ಥಿತಿ
D.ವೈಯಕ್ತಿಕ ವ್ಯತ್ಯಯನ
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

63 / 100

63) 3 ಮತ್ತು 4 ಗಂಟೆಗಳ ಮದ್ಯದ ಯಾವ ಸಮಯದಲ್ಲಿ ಗಡಿಯಾರದ ಮುಳ್ಳುಗಳು ವಿರುದ್ಧ ದಿಕ್ಕಿನಲ್ಲಿರುತ್ತವೆ.

64 / 100

64) ಅಖಿಲ ಭಾರತ ಹುಲಿ ಅಂದಾಜು ವರದಿ 2018 ರ ಮೇರೆಗೆ ಕರ್ನಾಟಕದಲ್ಲಿನ ಹುಲಿಗಳ ಸಂಖ್ಯೆ______

65 / 100

65) ಸಭೆಯೊಂದು ಬೆಳಗಿನ 11 : 00 ಗಂಟೆಗೆ ನಡೆಯಬೇಕಾಗಿದ್ದು ‘P’ ಎಂಬ ವ್ಯಕ್ತಿಯು ತಾನು ಭಾಗವಹಿಸಬೇಕಾದ ಸಭೆ ನಡೆಯುವ ಸ್ಥಳದಿಂದ 100 km ದೂರದಲ್ಲಿದ್ದಾನೆ. ‘P’ ಯು 09 : 45 ಕ್ಕೆ ತನ್ನ ಕಾರಿನಲ್ಲಿ ಹೊರಟು 60 kmph ವೇಗದಲ್ಲಿ ಬಂದರೆ ಸಭೆಗೆ ಎಷ್ಟು ನಿಮಿಷ ತಡವಾಗಿ ಬರುವನು?

66 / 100

66) ಇತ್ತೀಚೆಗೆ ಬಿಡುಗಡೆಯಾದ “ಶ್ರೀವತ್ಸ ಸ್ಕೃತಿ” ಪುಸ್ತಕವನ್ನು ಬರೆದವರು

67 / 100

67) ವಿದ್ಯಾರ್ಥಿಯೊಬ್ಬ 180 ಅಂಕ ಇರುವ ಭೌತಶಾಸ್ತ್ರದ ಮೊದಲ ಪತ್ರಿಕೆಯಲ್ಲಿ ಶೇ. 30 ರಷ್ಟು ಅಂಕಗಳನ್ನು ಗಳಿಸಿದ್ದಾನೆ. ಎರಡು ಪತ್ರಿಕೆಗಳಿಂದ ಕನಿಷ್ಠ ಶೇ. 50 ರಷ್ಟು ಅಂಕಗಳನ್ನು ಗಳಿಸಬೇಕು. ಎರಡನೇ ಪತ್ರಿಕೆಯಲ್ಲಿ 150 ಅಂಕಗಳಿಗೆ ಎರಡನೆ ಪತ್ರಿಕೆಗಳಲ್ಲಿ ಪತ್ರಿಕೆಯಲ್ಲಿ ಆತ ಗಳಿಸಬೇಕಾದ ಶೇಕಡವಾರು ಅಂಕಗಳು______

68 / 100

68) ರಂಗಭೂಮಿ ಕ್ಷೇತ್ರದಲ್ಲಿನ ಅತ್ಯದ್ಭುತ ಸ್ಮರಣೀಯ ಸಾಧನೆ ಗೈದ ಜನರಿಗಾಗಿ ನೀಡಲಾಗುವ ಡಾII ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು 2018ನೇ ಸಾಲಿನಲ್ಲಿ_____ರವರಿಗೆ ಕೊಡಲಾಯಿತು.

69 / 100

69) _______ಒಂದು ಪರಿಸರ ನೆಲೆ(ಸ್ಥಾನ) (Niche) ಯನ್ನು ವಿವರಿಸುತ್ತದೆ .

70 / 100

70) ಈ ಕೆಳಗಿನ ಕಾರಣಗಳಿಂದಾಗಿ ನೆಲಗಡೆಲೆ ಕೇಕ್ ಅಥವಾ ಮೀನು ಹಿಟ್ಟು (Fish Meal) ಬದಲಿಗೆ ಸೋಯಾಬೀನ್ ಹಿಟ್ಟಿನ ಉಪಯೋಗಕ್ಕೆ ಆದ್ಯತೆ ನೀಡಲಾಗಿದೆ.
A.ಮೀನು ಹಿಟ್ಟು (Fish Meal) ಅನೇಕ ವೇಳೆ ಹೆಚ್ಚಿನ ಮಟ್ಟದ ಮರಳು, ಸಿಲಿಕಾ ಮತ್ತು ಉಪ್ಪಿನಿಂದ ಕಲುಷಿತವಾಗಿರುತ್ತದೆ.
B.ಸೋಯಾಬೀನ್ ಮಿಲ್ ನಲ್ಲಿಯ ಅಮಿನೊ ಆಮ್ಲಗಳ ನಮೂನೆಯ ಹೆಚ್ಚು ಅಪೇಕ್ಷಣೀಯವಾಗಿದೆ.
C.ಫಿಶ್ ಮಿಲ್ ಮತ್ತು ಸೋಯಾಬೀನ್ ಮಿಲ್ ಗಿಂತ ನೆಲಗಡಲೆ ಕೇಕ್ ಹೆಚ್ಚು ಬೆಲೆಯದ್ದಾಗಿದೆ.
D.ಸೊಯಾಬೀನ್ ಮಿಲಚ ಪ್ರೋಟೀನಿನ ಪಚನತೆಯು ಸುಮಾರು 97%.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

71 / 100

71) 36 ವಾಹನಗಳನ್ನು ನಿಲ್ದಾಣದಲ್ಲಿ ಒಂದೇ ಸಾಲಿನಲ್ಲಿ ಜೋಡಿಸಲಾಗಿದೆ. ಮೊದಲ ಕಾರಿನ ಅನಂತರ ಒಂದು ಸ್ಕೂಟರ್, ಎರಡನೇ ಕಾರಿನ ಅನಂತರ ಎರಡು ಸ್ಕೂಟರ್ ಗಳನ್ನು ನಿಲ್ಲಿಸಲಾಗಿದೆ. ಹಾಗೆಯೇ ಮುಂದುವರೆದಲ್ಲಿ ಎರಡನೇ ಉತ್ತರಾರ್ಧದಲ್ಲಿ ಸ್ಕೂಟರ್ ಗಳ ಸಂಖ್ಯೆಯನ್ನು ಲೆಕ್ಕ ಮಾಡಿ.

72 / 100

72) ಈ ಕೆಳಗಿನವರ ಪೈಕಿ ಯಾರು ಸಹಕಾರ ಕ್ಷೇತ್ರದ ಸೇವೆಗಾಗಿ, 2019ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ?

73 / 100

73) ರಾಷ್ಟ್ರೀಯ ಆಹಾರ ಸುರಕ್ಷಾ ನಿಯೋಗದ ಧ್ಯೇಯಗಳು ಇವುಗಳ ಉತ್ಪಾದನೆಯನ್ನು ವರ್ದಿಸುವುದು.

74 / 100

74) ಕುಟುಂಬವೊಂದರಲ್ಲಿ J, K, L, M, N ಮತ್ತು O ಎಂಬ ಆರು ಮಂದಿ ಸದಸ್ಯರು ಇದ್ದಾರೆ. ಅದರಲ್ಲಿ ಇಬ್ಬರು ಮದುವೆಯಾದ ದಂಪತಿಗಳು. K ಯು ವೈದ್ಯ ಮತ್ತು N ನ ತಂದೆ, O ನು L ನ ಅಜ್ಜ ಮತ್ತು ಗುತ್ತಿಗೆದಾರ. M ಎಂಬಾಕೆ N ನ್ನ ಅಜ್ಜಿ ಮತ್ತು ಗೃಹಿಣಿ. ಈ ಕುಟುಂಬದ ಒಬ್ಬ ವೈದ್ಯ, ಒಬ್ಬ ಗುತ್ತಿಗೆದಾರ, ಒಬ್ಬ ಗೃಹಿಣಿ, ಒಬ್ಬ ನರ್ಸ್ ಮತ್ತು ಇಬ್ಬರು ವಿದ್ಯಾರ್ಥಿಗಳಿದ್ದಾರೆ ಹಾಗಿದ್ದರೆ J ಯ ವೃತ್ತಿ ಏನು?

75 / 100

75) 2019- 20 ರ ಕರ್ನಾಟಕ ಬಜೆಟ್ ನ ಒಟ್ಟು ವಿನಿಯೋಜನೆಯಲ್ಲಿ, ಎಷ್ಟು ಶೇಕಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ ನೀಡಲಾಗಿದೆ?

76 / 100

76) ವ್ಯೋಮಯಾನದ ಅವಧಿಯಲ್ಲಿ ಖಗೋಳಯಾನಿಗಳು ಮೂತ್ರದ ಮೂಲಕ ಕ್ಯಾಲ್ಸಿಯಂನ ಸಾರಭೂತ ಪ್ರಮಾಣದ ನಷ್ಟಕ್ಕೊಳಗಾಗುವುದು ಕಂಡುಬಂದಿದೆ ಇದಕ್ಕೆ ಕಾರಣ_____

77 / 100

77) ಎ, ಬಿ, ಸಿ, ಡಿ ಮತ್ತು ಇ ಎಂಬ 05 ಗೆಳೆಯರು ಬೆಂಚಿನ ಮೇಲೆ ಕುಳಿತಿದ್ದಾರೆ.
I. ಎ ಯು ಬಿ ಯ ಪಕ್ಕ ಕುಳಿತಿದ್ದಾನೆ.
II. ಸಿ ಯು ಡಿ ಯ ಪಕ್ಕ ಕುಳಿತಿದ್ದಾನೆ.
III.ಡಿ ಯು ಇ ನೊಂದಿಗೆ ಕುಳಿತಿಲ್ಲ.
IV.ಇ ಯೂ ಬೆಂಚಿನ ಬೆಂಚಿನ ಎಡತುದಿಗೆ ಕುಳಿತಿದ್ದಾನೆ.
V.ಸಿ ಯು ಬಲದಿಂದ ಎರಡನೇ ಸ್ಥಾನದಲ್ಲಿ ಕುಳಿತಿದ್ದಾನೆ.
VI.ಎ ಯು ಬಿ ಮತ್ತು ಇ ಯ ಬಲಭಾಗಕ್ಕೆ ಕುಳಿತಿದ್ದಾನೆ.
VII.ಎ ಮತ್ತು ಸಿ ಒಟ್ಟಿಗೆ ಕುಳಿತಿದ್ದಾರೆ.

ಬಿ ಯ ಸ್ಥಾನವೇನು?

78 / 100

78) 2019ನೇ ಸಾಲಿನ ಶೌರ್ಯ ಪ್ರಶಸ್ತಿ ಪಡೆದ ಕರ್ನಾಟಕದ ಇಬ್ಬರು ವಿಜೇತರು

79 / 100

79) ______ಅನ್ಬು ಉಪಯೋಗಿಸಿದಾಗ ಜಾತಿ /ಪ್ರಭೇದಗಳ ಉತ್ತಮ ರೀತಿಯ ಹಂಚಿಕೆಯನ್ನು ಅಳೆಯಬಹುದು.

80 / 100

80) ಆಹಾರ ಜಾಲದ ಮೂಲಕ ಶಕ್ತಿ ವರ್ಗಾವಣೆಯ ದಕ್ಷತಾ ಸಾಮರ್ಥ್ಯದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಿಲ್ಲ ?

81 / 100

81) ದೊಡ್ಡ ಕರುಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ?
A.ಸೀಕಿಮ್, ಕೊಲೋನ್, ರೆಕ್ಟಮ್ ಮತ್ತು ಮಲ /ಗುದದ್ವಾರವನ್ನು ಅದು ಒಳಗೊಂಡಿದೆ.
B.ದೊಡ್ಡಕರುಳಿನಲ್ಲಿ ಆಗುವ ರಾಸಾಯನಿಕ ಜೀರ್ಣಕ್ರಿಯೆಯ ಕೊನೆಯ ಹಂತಗಳು ಬ್ಯಾಕ್ಟೀರಿಯಾಗಳ ಕ್ರಿಯೆಯ ಮುಖಾಂತರ ನಡೆಯುತ್ತದೆ. ಪದಾರ್ಥ ಮುಂದೆ ಜೀರ್ಣವಾಗುತ್ತದೆ ಮತ್ತು ಕೆಲವು ವಿಟಮಿನ್ ಗಳ ಸಂಶ್ಲೇಷಣೆಗೊಳ್ಳುತ್ತವೆ.
C.ದೊಡ್ಡಕರುಳು ನೀರು, ಅಯಾನುಗಳು ಮತ್ತು ವಿಟಮಿನ್ ಗಳನ್ನು ಹೀರಿಕೊಳ್ಳುತ್ತವೆ.
D.ಗುದದಿಂದ ಮಲವನ್ನು ಹೊರಹಾಕುವುದನ್ನು ಮಲವಿಸರ್ಜನೆ (ಶುದ್ಧೀಕರಣ) ಎನ್ನಲಾಗುವುದು. ಮಲವಿಸರ್ಜನೆಯು ಪರಾವರ್ತಿತ ಪ್ರತಿಕ್ರಿಯೆಯೇ ಆಗಿದ್ದು, ಇದು ವಪೆ ಮತ್ತು ಕಿಬ್ಬೊಟ್ಟೆಯ ಐಚ್ಛಿಕ ಸಂಕೋಚನಗಳ ನೆರವಿನಿಂದ ಆಗುವ ಪರಾವರ್ತಿತ ಪ್ರತಿಕ್ರಿಯೆ.
ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

82 / 100

82) ಒಂದು ತರಬೇತಿ ಕಾಲೇಜು ಮೆಕ್ಯಾನಿಕ್ಸ್, ಮನಃಶಾಸ್ತ್ರ, ತತ್ವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ಇಂಜಿನಿಯರಿಂಗ್ ಈ ಏಳು ವಿಧದ ವಿಷಯಗಳ ಶಿಕ್ಷಕರುಗಳಿಗೆ ಜುಲೈ 22 ರಿಂದ 29 ರವರೆಗೆ ಪುನಶ್ಚೇತನ ಕೋರ್ಸ್ ಅನ್ನು ನಡೆಸಬೇಕಿದೆ.
I.ಕೋರ್ಸ್ ಮನಃಶಾಸ್ತ್ರದೊಂದಿಗೆ ಮೊದಲಾಗಬೇಕು.
II.23ನೇ ಜುಲೈ ಭಾನುವಾರದ ಕಾರಣ ರಜಾದಿನ.
III.ವಿಜ್ಞಾನ ವಿಷಯವು ಎಂಜಿನಿಯರಿಂಗ್ ವಿಷಯದ ಹಿಂದಿನ ದಿನ ಇರಬೇಕು.
IV.ಕೋರ್ಸ್ ಮೆಕಾನಿಕ್ಸ್ ವಿಷಯದೊಂದಿಗೆ ಮುಕ್ತಾಯ ಆಗಬೇಕು.
V.ತತ್ವಶಾಸ್ತ್ರವು ರಜೆಯ ಮಾರನೇ ದಿನವೇ ಇರಬೇಕು.
VI.ಅರ್ಥಶಾಸ್ತ್ರ ಮತ್ತು ಇಂಜಿನಿಯರಿಂಗ್ ನಡುವೆ ಒಂದು ದಿನದ ಅಂತರ ಇರಬೇಕು.
VII.ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ನಡುವೆ ಎರಡು ದಿನದ ಅಂತರ ಇರಬೇಕು.
ಈ ಮಾಹಿತಿ ಆಧರಿಸಿ ವಿಜ್ಞಾನದ ತರಬೇತಿ ಹಿಂದಿನ ದಿನ ಯಾವ ವಿಷಯವೂ ಇರುತ್ತದೆ?

83 / 100

83) 2020-21ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಸರ್ಕಾರವು ಮಹದಾಯಿ ನೀರಾವರಿಗೆ ಸಂಬಂಧಪಟ್ಟ ಕಾಮಗಾರಿಗೆ _____ಹಂಚಿಕೆಯಾಗಿದೆ.

84 / 100

84) 2019-20ನೇ ಹಣಕಾಸು ವರ್ಷದ ಕರ್ನಾಟಕ ಸರ್ಕಾರದ ಮುಂಗಡ ಪತ್ರದ ಗಾತ್ರ______

85 / 100

85) ಗಡಸು ನೀರಿನಲ್ಲಿರುವ ಲೋಹೀಯ ಘಟಕಗಳು ಯಾವುವು ?

86 / 100

86) ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಸಂಘಟಿಸಿದ್ದ 2019ರ ಬೆಂಗಳೂರು ಓಪನ್ ಗಾಲ್ಫ್ ಚಾಂಪಿಯನ್ ಶಿಪ್ಪನ್ನು ಗೆದ್ದವರು ಯಾರು?

87 / 100

87) ಒಂದು ಸಂಖ್ಯೆಯು ಎರಡು ಅಂಕಿಗಳಾಗಿದ್ದು, ಅದರ ಅಂಕಿಗಳ ಗುಣಲಬ್ಧವು 14. ಈ ಸಂಖ್ಯೆಗೆ 45 ನ್ನು ಸೇರಿಸಿದರೆ ಅಂಕಿಗಳ ಸ್ಥಾನಗಳು ಅದಲು ಬದಲಾಗುತ್ತವೆ. (ಅಂದರೆ 12+9=21) ಆ ಸಂಖ್ಯೆ ಯಾವುದು?

88 / 100

88) ನೀವೇ ಜಿಲ್ಲಾ ನ್ಯಾಯಾಧೀಶರೆಂದು ನಿಮ್ಮ ಜಿಲ್ಲೆಯಲ್ಲಿ ಸಕ್ಕರೆ ಕೊರತೆಯಿದೆಯೆಂದು ಭಾವಿಸಿಕೊಳ್ಳಿರಿ. ಸರ್ಕಾರವು ಮದುವೆಗಳಿಗೆ ಗರಿಷ್ಠ 30kg ಸಕ್ಕರೆ ಮಾತ್ರ ಪೂರೈಸಲು ಆದೇಶಿಸಿದೆ. ನಿಮ್ಮ ಆತ್ಮೀಯ ಗೆಳೆಯನ ಮಗ ಮದುವೆಯಾಗುತ್ತಿದ್ದು, ನಿಮ್ಮ ಗೆಳೆಯರು ಕನಿಷ್ಠ 50kg ಸಕ್ಕರೆ ನೀಡಲು ಕೋರಿದ್ದಾರೆ. ಆಗ ನೀವು ಮುಜುಗರಗೋಳಕ್ಕಾಗಿ ಸರ್ಕಾರದ ನಿರ್ಬಂಧದ ಬಗ್ಗೆ ಹೇಳುವಿರಿ. ನೀವೇ ಜಿಲ್ಲಾ ನ್ಯಾಯಾಧೀಶರಾಗಿರುವುದರಿಂದ ಎಷ್ಟು ಬೇಕಾದರೂ ಬಿಡುಗಡೆ ಮಾಡಬಹುದೆಂದು ನಿಮ್ಮ ಗೆಳೆಯರು ಹೇಳುವರು. ಅವರೊಂದಿಗಿನ ನಿಮ್ಮ ಗೆಳೆತನವನ್ನು ಕಳೆದುಕೊಳ್ಳಲು ನಿಮಗೆ ಇಚ್ಛೆಯಿಲ್ಲ. ಆಗ ಹೇಗೆ ಸಂದರ್ಭವನ್ನು ನಿರ್ವಹಿಸುವಿರಿ.

89 / 100

89) ಇಂಟರ್ ಫೆರಾನ್ ಗಳು ಗ್ಲೈಕೋಪ್ರೋಟೀನ್ ಗಳಾಗಿದ್ದು ಅವು______ಗಳ ಸಂಶ್ಲೇಷಣೆಯನ್ನು ಪ್ರಚೋದಿಸುತ್ತದೆ.

90 / 100

90) ಸಾವಿರಾರು ಅಂಚೆ ನೌಕರರ ನಿಸ್ವಾರ್ಥ ಸೇವೆಗಾಗಿ ಅವರ ಸ್ಮರಣೆಗಾಗಿ ಬೆಳಗಾವಿಯಲ್ಲಿ 2018ರಲ್ಲಿ 2ನೇ ಪೋಸ್ಟ ಮನ್ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಆದರೆ ಕರ್ನಾಟಕದಲ್ಲಿ ಮೊದಲನೆಯ ಪೋಸ್ಟ್ ಮನ್ ಪ್ರತಿಮೆಯನ್ನು ಎಲ್ಲಿ ಸ್ಥಾಪಿಸಲಾಯಿತು?

91 / 100

91) ಕರ್ನಾಟಕ ಸ್ಥಳಜನ್ಯ ದಳ ತಳಿಯ ಹೆಸರು_____

92 / 100

92) ಕರ್ನಾಟಕದ ರೈತ ಸಾರಥಿ ಯೋಜನೆಯ ಮುಖ್ಯ ಉದ್ದೇಶವು_____

93 / 100

93) _______ಒಂದು ರೈಲ್ವೆ ಪಥದ ಒಂದು ತಿರುವಿನಲ್ಲಿ ಹೋಲಿಕೆ ಮಾಡಿದಾಗ ಹೊರಬದಿಯ ಪಥ/ಅಂಚು ಒಳಗಿನದಂಕ್ಕಿಂತ ಎತ್ತರದಲ್ಲಿ ಏರಿಕೆಯಾಗುವುದು.

94 / 100

94) ವಿರುದ್ಧ ದಿಕ್ಕಿನಲ್ಲಿ ಚಲಿಸುವ ಎರಡು ರೈಲುಗಳು ಫ್ಲ್ಯಾಟ್ ಫಾರಂ ಮೇಲೆ ನಿಂತಿರುವ ಒಬ್ಬ ವ್ಯಕ್ತಿಯನ್ನು 27 ಸೆಕೆಂಡುಗಳು ಮತ್ತು 17 ಸೆಕೆಂಡುಗಳಲ್ಲಿ ಅನುಕ್ರಮವಾಗಿ ಅಡ್ಡ ಹಾಕುತ್ತವೆ ಮತ್ತು ಆ ರೈಲುಗಳೇ ಒಂದಕ್ಕೊಂದು 23 ಸೆಕೆಂಡುಗಳಲ್ಲಿ ಅಡ್ಡ ಹಾಕುತ್ತವೆ. ಅವುಗಳ ವೇಗದ ಅನುಪಾತವು_____

95 / 100

95) 2020ರಲ್ಲಿ ರಾಬರ್ಟ್ ಬ್ರೂಸ್ ಪೂಟ್ ಪುರಾತತ್ವ ವಸ್ತು ಸಂಗ್ರಹಾಲಯವನ್ನು ಕರ್ನಾಟಕದಲ್ಲಿ ಇತ್ತೀಚೆಗೆ______ಇಲ್ಲಿ ಸ್ಥಾಪಿಸಲಾಯಿತು.

96 / 100

96) ಜೀವವೈವಿಧ್ಯ ಪ್ರಮುಖ ತಾಣ(Hotspot) ಗಳೆಂದು ವ್ಯಾಖ್ಯಾನಿಸಲ್ಪಡುವ ಈ ಕೆಳಗಿನವುಗಳಲ್ಲಿ ಯಾವುವು ಮಾನದಂಡವಾಗಿವೆ.
A.ಪ್ರಭೇದಗಳ ವೈವಿಧ್ಯತೆ
B.ಸಸ್ಯ ಸಾಂದ್ರತೆ /ದಟ್ಟತೆ
C.ವ್ಯಾಪ್ತತೆ
D.ಜನಾಂಗೀಯ ಸಸ್ಯಶಾಸ್ತ್ರೀಯ ಪ್ರಾಮುಖ್ಯ
E.ಬೆದರಿಕೆ ನಿರೀಕ್ಷೆ
F.ಸ್ಥಳೀಯ ವಾಯುಗುಣಕ್ಕೆ ಪ್ರಭೇದಗಳ ಹೊಂದಾಣಿಕೆ.
ಕೆಳಗೆ ನೀಡಲಾದ ಆಯ್ಕೆಯಿಂದ ಸರಿಯಾದ ಉತ್ತರವನ್ನು ಆರಿಸಿ :

97 / 100

97) ಬೆಳೆಯುವ ಸಸ್ಯಗಳು ಬೆಳಕಿನ ಮೂಲದ ಒಂದೇ ಒಂದು ಬದಿಗೆ ಮಾತ್ರ ಬಾಗುತ್ತವೆ. ಈ ವಿದ್ಯಮಾನಕ್ಕೆ ಉತ್ತಮ ವಿವರಣೆಯನ್ನು ಗುರುತಿಸಿ .

98 / 100

98) ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗರಿಷ್ಟ 36% ಅಂಕಗಳನ್ನು ಪಡೆಯಬೇಕಾಗಿದೆ. ಒಬ್ಬ ವಿದ್ಯಾರ್ಥಿ 113 ಅಂಕಗಳನ್ನು ಪಡೆದು 85 ಅಂಕಗಳಿಂದ ಅನುತ್ತೀರ್ಣನೆಂದು ಪ್ರಕಟಿಸಲ್ಪಟ್ಟಿದೆ. ಹಾಗಾದರೆ ಗರಿಷ್ಠ ಅಂಕಗಳು_____

99 / 100

99) ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (2ನೇ ತಿದ್ದುಪಡಿ) ಮಸೂದೆ 2019ರ ಪ್ರಕಾರ ಕರ್ನಾಟಕದ ಮೂರು ಪರಿಶಿಷ್ಟ ಪಂಗಡಗಳನ್ನು ಸೇರಿಸಲು ಅನುಮೋದಿಸಲ್ಪಟ್ಟಿದೆ. ಅವುಗಳೆಂದರೆ_____

100 / 100

100) ಕರ್ನಾಟಕ ಏಕಲವ್ಯ ಪ್ರಶಸ್ತಿ ಪಡೆದವರು ಎಷ್ಟು ನಗದು ಮೊತ್ತವನ್ನು ಬಹುಮಾನವಾಗಿ ಪಡೆಯುತ್ತಾರೆ?

Your score is

Leave a Comment