
ಗಾಂಧಿ ಜಯಂತಿಯ ಶುಭಾಶಯಗಳು. Gandhi Jayanti Wishes in Kannada
ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿ ಅವರ ತ್ಯಾಗ, ಸೇವೆ, ಶ್ರಮವನ್ನು ಸ್ಮರಿಸೋಣ. ನಾಡಿನ ಸಮಸ್ತ ಜನತೆಗೆ ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು.

ದೇಶದ ಹೆಮ್ಮೆ, ಜಗತ್ತಿನ ಆದರ್ಶ, ಅಹಿಂಸಾ ಚಳುವಳಿಯ ರೂವಾರಿ ಮಹಾತ್ಮಾ ಗಾಂಧೀಜಿಯವರ ಜಯಂತಿ ಎಲ್ಲರಿಗೂ ಸನ್ಮತಿ ದಯಪಾಲಿಸಲಿ, ಗಾಂಧಿ ಜಯಂತಿಯ ಶುಭಾಶಯಗಳು..

ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಅಹಿಂಸಾತ್ಮಕ ಚಳವಳಿಗಳ ಮೂಲಕ ಬ್ರಿಟಿಷರನ್ನು ಎಡಬಿಡದೆ ಕಾಡಿದ ಮಹಾತ್ಮ ಗಾಂಧೀಜಿಯವರ ಹೋರಾಟದ ಹಾದಿಯು ನಮಗೆಲ್ಲರಿಗೂ ಸ್ಫೂರ್ತಿಯಾಗಿರಲಿ.

ನನ್ನ ಜೀವನವೇ ಒಂದು ಸಂದೇಶವಾಗಿದೆ.
ನನ್ನ ಅನುಮತಿಯಿಲ್ಲದೆ ಯಾರು ನನ್ನನ್ನು ನೋಯಿಸಲಾರರು.
ನಿಮಗೆ ಯಾರು ಮುಖ್ಯ ಎಂಬುದನ್ನು ನೀವು ಅವರನ್ನು ಕಳೆದುಕೊಳ್ಳುವ ತನಕ ತಿಳಿದುಕೊಳ್ಳಲಾರಿರಿ.
ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.
ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು.
ಪ್ರಾಣಿಗಳ ಬಗ್ಗೆಯಿರುವ ಕಾಳಜಿ ನೋಡಿ ನಾವು ಆ ದೇಶದ ಮಹಾನತೆ ಹಾಗೂ ಮೌಲಿಕ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಬಹುದು.


ಸ್ವಾಭಿಮಾನದ ನಷ್ಟಕ್ಕಿಂತ ದೊಡ್ಡ ನಷ್ಟ ಬೇರೊಂದಿಲ್ಲ.
ಸತ್ಯಕ್ಕಿಂತ ದೊಡ್ಡದಾದ ದೇವರಿಲ್ಲ.
ಮನುಷ್ಯ ಅವನ ಯೋಚನೆಗಳ ಉತ್ಪನ್ನವಾಗಿದ್ದಾನೆ. ಅವನ ಯೋಚನೆಯಂತೆ ಅವನಾಗುತ್ತಾನೆ.
ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
ನೀವು ಏನು ಯೋಚಿಸುತ್ತಿರಿ, ಏನು ಮಾತಾಡುತ್ತಿರಿ ಮತ್ತು ಏನು ಮಾಡುತ್ತಿರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿರ್ಧಾರಿತವಾಗುತ್ತದೆ.


ಪ್ರೀತಿ ಜಗತ್ತಿನ ಪ್ರಬಲ ಶಕ್ತಿಯಾಗಿದೆ.
ಬಡತನ ಹಿಂಸೆಯ ಅತ್ಯಂತ ಕೆಟ್ಟ ರೂಪವಾಗಿದೆ.
ಜಗತ್ತಿನಲ್ಲಿರುವ ಎಲ್ಲಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ.
ನಿಮ್ಮನ್ನು ನೀವು ಕಂಡುಕೊಳ್ಳಲು ಇರುವ ಉತ್ತಮ ಮಾರ್ಗವೆಂದರೆ ಬೇರೆಯವರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಂಡು ಬಿಡುವುದು
ಅನಕ್ಷರತೆ ಭಾರತಕ್ಕೆ ಕಳಂಕವಾಗಿದೆ. ಅದು ತೊಲಗಬೇಕು.




